Wednesday, December 10, 2008

ಜಾಗತಿಕ ಅಖಂಡ ಭಜನೆ

ಜಾಗತಿಕ ಅಖಂಡ ಭಜನಾ ಕಾರ್ಯಕ್ರಮವು ಪ್ರತಿ ವರ್ಷದಂತೆ ನವೆಂಬರ್ ತಿಂಗಳ ಎರಡನೇ ಶನಿವಾರ ಮತ್ತು ಭಾನುವಾರದಂದು ಮೈಸೂರಿನ ಶ್ರೀ ಸತ್ಯ ಸಾಯಿ ಕ್ಷೇತ್ರದಲ್ಲಿ ನಡೆಯಿತು. ತಾ|| ೮-೧೧-೨೦೦೮ ರ ಸಂಜೆ ೬ ಗಂಟೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರಾದ ಶ್ರೀಮತಿ ಸುಕನ್ಯ ಪ್ರಭಾಕರ್ ರವರು ಹಾಗೂ ಮೈಸೂರಿನ ಜಿಲ್ಲಾಧ್ಯಕ್ಷರಾದ ಶ್ರೀ ಪ್ರಸಾದ್ ರವರು ದೀಪಬೆಳಗಿಸುವುದರ ಮೂಲಕ ಜಾಗತಿಕ ಅಖಂಡ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಅಖಂಡ ಭಜನಾ ಕಾರ್ಯಕ್ರಮವು ಮರುದಿನ ಸಂಜೆ ೬ ಗಂಟೆವರೆವಿಗೂ ನಿರಂತರವಾಗಿ ನಡೆಯಿತು.

No comments: