Monday, September 8, 2008

ಕಟ್ಟೆಹುಂಡಿಯಲ್ಲಿ ಗ್ರಾಮ ಸೇವೆ

ದಿ. 7.9.2008ರಂದು ಮೈಸೂರಿನ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಸೇವಾದಳದವರು ಮತ್ತು ಯುವ ವಿಭಾಗದವರು ಬೆಳಗ್ಗೆ ೯.೩೦ಕ್ಕೆ ಕಟ್ಟೆಹುಂಡಿ ಗ್ರಾಮಕ್ಕೆ ತೆರಳಿದರು.

ಗ್ರಾಮಸೇವೆಯ ಅಂಗವಾಗಿ ಮೊದಲಿಗೆ ಹಳ್ಳಿಯ ರಸ್ತೆಗಳ ಮುಖಾಂತರ ನಗರ ಸಂಕೀರ್ತನೆ ನಡೆಸಲಾಯಿತು.



ಬಳಿಕ
ವೈದ್ಯಕೀಯ ತಪಾಸಣಾ ಶಿಬಿರವನ್ನು ನಡೆಸಲಾಯಿತು.



ತಪಾಸಣೆಯ ನಂತರ ಉಚಿತವಾಗಿ ಔಷಧಿಗಳನ್ನೂ ಹಂಚಲಾಯಿತು. ಸುಮಾರು ೧೦೦ ಜನರನ್ನು ಪರೀಕ್ಷಿಸಿ ಔಷಧಗಳನ್ನು ನೀಡಲಾಯಿತು.




ವೈದ್ಯಕೀಯ ಶಿಬಿರವಲ್ಲದೆ ಹಳ್ಳಿಯ ಮಕ್ಕಳಿಗೆ ಬಾಲವಿಕಾಸ ತರಗತಿಯನ್ನೂ ನಡೆಸಲಾಯಿತು. ಸುಮಾರು ೪೦ ಜನ ಮಕ್ಕಳಿಗೆ ನೀತಿ ಕಥೆಗಳನ್ನು ಹೇಳಲಾಯಿತು.



ಕಡೆಯಲ್ಲಿ ಗ್ರಾಮಸ್ಥರೆಲ್ಲರಿಗೂ ನಾರಾಯಣ ಸೇವೆಯನ್ನು ನಡೆಸಲಾಯಿತು.



ಸಾಯಿರಾಂ.

No comments: