Tuesday, September 23, 2008

ಪ್ರೇಮಜ್ಯೋತಿ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಇಲ್ಲಿಯವರೆಗಿನ ತಮ್ಮ ಕೆಲಸ ಮತ್ತು ಸಾಧನೆಗಳ ಒಂದು ಚಿತ್ರ ಪ್ರದರ್ಶನವನ್ನು ಏರ್ಪಡಿಸಿತ್ತು. ಸ್ವಾಮಿಯ ನಿರ್ದೇಶನದಲ್ಲಿ ಕೈಗೊಂಡಿರುವ ಅನೇಕ ಮಾನವ ಸೇವಾ ಕಾರ್ಯಗಳ ಒಂದು ಇಣುಕು ನೋಟ ಇಲ್ಲಿ ಲಭ್ಯವಿತ್ತು. ಈ ವಿಶೇಷ ಪ್ರದರ್ಶನವನ್ನು ನೋಡಲು ಮೈಸೂರಿನ ಸಾಯಿ ಭಕ್ತರ ತಂಡವೊಂದು ಸೆಪ್ಟೆಂಬರ್ 21ರಂದು ಬೆಂಗಳೂರಿಗೆ ತೆರಳಿತು. ಈ ಪಯಣದ ಕೆಲವು ಚಿತ್ರಗಳನ್ನು ಇಲ್ಲಿ ಕೊಡಲಾಗಿದೆ :









Monday, September 8, 2008

ಕಟ್ಟೆಹುಂಡಿಯಲ್ಲಿ ಗ್ರಾಮ ಸೇವೆ

ದಿ. 7.9.2008ರಂದು ಮೈಸೂರಿನ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಸೇವಾದಳದವರು ಮತ್ತು ಯುವ ವಿಭಾಗದವರು ಬೆಳಗ್ಗೆ ೯.೩೦ಕ್ಕೆ ಕಟ್ಟೆಹುಂಡಿ ಗ್ರಾಮಕ್ಕೆ ತೆರಳಿದರು.

ಗ್ರಾಮಸೇವೆಯ ಅಂಗವಾಗಿ ಮೊದಲಿಗೆ ಹಳ್ಳಿಯ ರಸ್ತೆಗಳ ಮುಖಾಂತರ ನಗರ ಸಂಕೀರ್ತನೆ ನಡೆಸಲಾಯಿತು.



ಬಳಿಕ
ವೈದ್ಯಕೀಯ ತಪಾಸಣಾ ಶಿಬಿರವನ್ನು ನಡೆಸಲಾಯಿತು.



ತಪಾಸಣೆಯ ನಂತರ ಉಚಿತವಾಗಿ ಔಷಧಿಗಳನ್ನೂ ಹಂಚಲಾಯಿತು. ಸುಮಾರು ೧೦೦ ಜನರನ್ನು ಪರೀಕ್ಷಿಸಿ ಔಷಧಗಳನ್ನು ನೀಡಲಾಯಿತು.




ವೈದ್ಯಕೀಯ ಶಿಬಿರವಲ್ಲದೆ ಹಳ್ಳಿಯ ಮಕ್ಕಳಿಗೆ ಬಾಲವಿಕಾಸ ತರಗತಿಯನ್ನೂ ನಡೆಸಲಾಯಿತು. ಸುಮಾರು ೪೦ ಜನ ಮಕ್ಕಳಿಗೆ ನೀತಿ ಕಥೆಗಳನ್ನು ಹೇಳಲಾಯಿತು.



ಕಡೆಯಲ್ಲಿ ಗ್ರಾಮಸ್ಥರೆಲ್ಲರಿಗೂ ನಾರಾಯಣ ಸೇವೆಯನ್ನು ನಡೆಸಲಾಯಿತು.



ಸಾಯಿರಾಂ.

Saturday, September 6, 2008

ಗ್ರಾಮ ಸೇವೆ

ದಿನಾಂಕ 7.9.2008ರಂದು ಕಟ್ಟೆಹುಂಡಿ ಗ್ರಾಮದಲ್ಲಿ ಸೇವಾ ಕಾರ್ಯಗಳನ್ನು ಯೋಜಿಸಲಾಗಿದೆ. ಹಳ್ಳಿಯಲ್ಲಿ ನಾರಾಯಣ ಸೇವೆ, ಉಚಿತ ವೈದ್ಯಕೀಯ ತಪಾಸಣೆ ಮತ್ತು ಉಚಿತ ಔಷಧಿ ವಿತರಣೆ, ಬಾಲವಿಕಾಸ ತರಗತಿಗಳು, ನಗರ ಸಂಕೀರ್ತನೆಗಳನ್ನು ನಡೆಸಲಾಗುತ್ತದೆ. ಸೇವೆಯಲ್ಲಿ ಪಾಲ್ಗೊಳ್ಳಲು ಆಸಕ್ತಿಯುಳ್ಳವರು ಭಾನುವಾರ ಬೆಳಗ್ಗೆ 9.00 ಗಂಟೆಯೊಳಗೆ ಚಾಮರಾಜಾಪುರಂನಲ್ಲಿರುವ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದಲ್ಲಿ ಸೇರಬೇಕಾಗಿ ವಿನಂತಿ.

Monday, September 1, 2008

ಸ್ವಾಗತ

ಸಾಯಿ ರಾಂ

ಇಂದಿನಿಂದ ಈ ತಾಣದಲ್ಲಿ ಮೈಸೂರಿನ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಕಾರ್ಯ ಚಟುವಟಿಕೆಗಳನ್ನು ವೀಕ್ಷಿಸಬಹುದು.

ಹಿಂದೆ ನಡೆದ ಹಾಗೂ ನಡೆಯಲಿರುವ ಕಾರ್ಯಕ್ರಮಗಳ ಪಟ್ಟಿಯನ್ನೂ ಇಲ್ಲಿ ಕೊಡಲು ಉದ್ದೇಶಿಸಲಾಗಿದೆ.

ಸ್ವಾಮಿಯ ಆಶೀರ್ವಾದದಿಂದ ಮತ್ತು ನಿಮ್ಮೆಲ್ಲರ ಸಹಕಾರದಿಂದ ನಮ್ಮ ಈ ಪ್ರಯತ್ನವು ಯಶಸ್ವಿಯಾಗಲೆಂದು ಪ್ರಾರ್ಥಿಸುತ್ತೇವೆ.

ಸಾಯಿರಾಂ.