Friday, March 6, 2009

ಮಹಾಶಿವರಾತ್ರಿ ಆಚರಣೆ


ಫೆಬ್ರವರಿ ೨೩, ೨೦೦೯ ರ ಸೋಮವಾರದಂದು ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದಲ್ಲಿ ಮಹಾಶಿವರಾತ್ರಿಯನ್ನು ಸಂಭ್ರಮದಿಂದ ಆಚರಿಸಲಾಯಿತು . ಹಬ್ಬದ ಆಚರಣೆಯ ಅಂಗವಾಗಿ ಸೋಮವಾರ ಸಂಜೆ ೬ಗಂಟೆಯಿಂದ ಮಂಗಳವಾರ ಬೆಳಗ್ಗೆ ೬ ಗಂಟೆಯವರೆಗೆ ನಾಮಸಂಕೀರ್ತನೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಪ್ರಸಿದ್ಧ ಹಿಂದೂಸ್ತಾನಿ ಗಾಯಕರಾದ ಶ್ರೀ. ವೀರಭದ್ರಯ್ಯ ಹಿರೇಮಠ ಜ್ಯೋತಿಯನ್ನು ಬೆಳಗಿಸಿ ಉದ್ಘಾಟಿಸಿದರು.












ಶ್ರೀ. ವೀರಭದ್ರಯ್ಯ ಹಿರೇಮಠ ಗದಗಿನ ವೀರೇಶ್ವರ ಪುಣ್ಯಾಶ್ರಮದ ಡಾ. ಪಂಡಿತ್ ಪುಟ್ಟರಾಜ ಗವಾಯಿಗಳ ಶಿಷ್ಯರಾಗಿದ್ದು,
ಗುರುಕುಲ ಪದ್ಧತಿಯಲ್ಲಿ ಅಭ್ಯಾಸ ಮಾಡಿದವರಾಗಿರುತ್ತಾರೆ. ಇವರು ದೇಶದಾದ್ಯಂತ ಹಲವಾರು ಪ್ರತಿಷ್ಠಿತ ಸಭೆಗಳಲ್ಲಿ ಸಂಗೀತ ಸುಧೆಯನ್ನು ಹರಿಸಿ ನಮ್ಮ ದೇಶದ ಅತ್ಯುನ್ನತ ಹಾರ್ಮೋನಿಯಂ ವಾದಕರಲ್ಲಿ ಒಬ್ಬರಾಗಿದ್ದಾರೆ. ಪ್ರಸ್ತುತ ಇವರು ಸ್ವರ ಸಂಕುಲ
ಎಂಬ ಸಂಗೀತ ಶಾಲೆಯನ್ನು ಮೈಸೂರಿನಲ್ಲಿ ಸ್ಥಾಪಿಸಿದ್ದಾರೆ.

ಮಹಾಶಿವರಾತ್ರಿ ಜಾಗರಣೆಯ ಮಹತ್ವ ವನ್ನು ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಹೀಗೆ ವಿವರಿಸಿದ್ದಾರೆ : ಶಿವರಾತ್ರಿ ಎಂದರೆ ಮಂಗಳವಾದ ರಾತ್ರಿ. ಆ ರಾತ್ರಿಯನ್ನು ಒಳ್ಳೆಯದನ್ನು ನೋಡುವುದರಲ್ಲಿ, ಕೇಳುವುದರಲ್ಲಿ, ಒಳ್ಳೆಯ ಮಾತುಗಳನ್ನು ಆಡುವುದರಲ್ಲಿ ಕಳೆಯಬೇಕು. ಒಳ್ಳೆಯ ವಿಚಾರಗಳಲ್ಲಿ ತೊಡಗಿಸಿಕೊಂಡು ಜಾಗರಣೆಯನ್ನು ಆಚರಿಸಿ, ಅದನ್ನೇ ನಿತ್ಯ ಜೀವನದಲ್ಲೂ ಅನುಸರಿಸಬೇಕು. ಆ ರಾತ್ರಿಯನ್ನು ಸಾಧನಾ ಮಾರ್ಗಗಳಾದ ಭಜನೆ ಮತ್ತು ಪುಣ್ಯ ಗ್ರಂಥಗಳ ಪಠಣಗಳ ಸಹಾಯದಿಂದ ಮನಸ್ಸನ್ನು ಆಸೆ ಮತ್ತು ದ್ವೇಷಗಳ ಗೋಜಲಿನಿಂದ ಗೆಲ್ಲಬಹುದಾಗಿದೆ

ಈ ಸದುದ್ದೇಶಗಳಿಂದ ಕೂಡಿದ್ದ ಮಹಾಶಿವರಾತ್ರಿಯನ್ನು ಮೈಸೂರು ಜಿಲ್ಲೆಯ ಸಾಯಿ ಭಕ್ತರು ವಿಶ್ವದ ಎಲ್ಲರ ಹಿತವನ್ನು ಬಯಸಿ, ನಾಮ ಸಂಕೀರ್ತನೆಯಿಂದ ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಆಚರಿಸಿದರು. ಹನ್ನೆರಡು ಗಂಟೆಗಳ ಅವಧಿಯಲ್ಲಿ ಸುಮಾರು ೨೦೨ ನಾಮ ಸಂಕೀರ್ತನೆಗಳನ್ನು ಹಾಡಲಾಯಿತು.ಮಂಗಳವಾರ ಬೆಳಗ್ಗೆ ಮಂಗಳಾರತಿಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.












































Saturday, January 3, 2009

ಶ್ರೀ ಸತ್ಯಸಾಯಿ ವ್ರತ ಮತ್ತು ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ೮೩ನೇ ವರ್ಧಂತ್ಯುತ್ಸವ

ಡಿಸೆಂಬರ್ ೨೮, ೨೦೦೮ ರ ಭಾನುವಾರದಂದು ಶ್ರೀ ಸತ್ಯಸಾಯಿ ವ್ರತ ಮತ್ತು ಶ್ರೀ ಸತ್ಯಸಾಯಿ ಬಾಬಾರವರ ೮೩ನೇ ವರ್ಧಂತ್ಯುತ್ಸವವನ್ನು ಸಾಯಿ ವೈಭವ ಕೇಂದ್ರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮವು ಮಂಗಳೂರಿನ ಸಂಸ್ಕೃತ ವಿದ್ವಾಂಸರಾದ ಡಾ. ಏ. ಕುಮಾರ ಸುಬ್ರಮಣ್ಯ ಭಟ್ ಅವರ ನೇತೃತ್ವದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಕೆ. ಕೇಶವಮೂರ್ತಿ, ನಿರ್ದೇಶಕರು, ಭಾರತೀಯ ವಿದ್ಯಾ ಕೇಂದ್ರ ವಹಿಸಿದ್ದರು. ವೇದಘೋಷದೊಂದಿಗೆ ಪ್ರಾರಂಭವಾದ ಶ್ರೀ ಸತ್ಯಸಾಯಿ ವ್ರತ ಕಾರ್ಯಕ್ರಮದಲ್ಲಿ ೮೩ ದಂಪತಿಗಳು ಭಾಗವಹಿಸಿದ್ದರು.

ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ಗಳು ಮೈಸೂರಿನ ಸೇವಾ ಕಾರ್ಯ ಕ್ರಮಗಳ ಚಿತ್ರ ಪ್ರದರ್ಶನ

ಮೈಸೂರಿನ ೨೦೦೮ ರ ದಸರಾ ವಸ್ತು ಪ್ರದರ್ಶನದಲ್ಲಿ ಭಗವಾನ್ ಬಾಬಾರವರ ಬಾಲ್ಯ ಮತ್ತು ಸತ್ಯ ಸಾಯಿ ಸೇವಾ ಟ್ರಸ್ಟ್ ಪ್ರಶಾಂತಿ ನಿಲಯಂ ಪುಟ್ಟಪರ್ತಿ ಕೈಗೊಂಡಿರುವ ಸೇವಾ ಕಾರ್ಯಗಳ ಚಿತ್ರಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಚಿತ್ರಪ್ರದರ್ಶನದಲ್ಲಿ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು ಮೈಸೂರು ಕೈಗೊಂಡಿರುವ ವಿವಿಧ ಸೇವಾ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿಯನ್ನು ಒಳಗೊಂಡ ಸಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಚಿತ್ರಪ್ರದರ್ಶನಕ್ಕೆ ಎರಡನೆ ಬಹುಮಾನ ದೊರೆತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.